ಯತ್ತ್ ನೋಡಿದರು ಬರೆ ನಾಟಕನ. ಎಲ್ಲರು ಸೋಂಗ ಹಾಕಿದವರ. ನಾವ್, ನಾವ್ ಹೆಂಗಿದ್ದೆವೋ ಹಂಗ ಇದ್ದ ಎಸ್ಟ ದಿವಸ, ಎಸ್ಟ ವರ್ಷ ಆತೋ. ಬೆಂಗಳೂರ್ ಹಂತ ಊರಾಗ, ಮತ್ತ ಸೊಫ್ಟ್ವೇರ್ ಕ್ಷ್ಟೇತ್ರದಾಗ ಇದ್ರ ಅಂತು ಮುಗದ ಹೋತು... ನಮ್ಮ ಜೀವನನ ನಮಗ ಅರ್ಥ ಆಗಂಗಿಲ್ಲ . ನಮಗ ಏನ್ ಶೆರ್ತದ , ನಾವ್ ಏನ್ ಮಾಡಿದ್ರ ಸಮಾಧಾನ ಸಿಗ್ತದ ಅನ್ನೋದನ್ನ ವಿಚರರೆ ಮಾಡ್ತೆವಿ ? ಬರೆ ರೊಕ್ಕದ ಹಿಂದ ಓಡೋದ ಆತು ... ಒಂದ್ ನಿಮಿಷ ಶಾಂತ ಕುಡ್ಲಿಕ್ಕೆ ನಮಗ ಆಗ್ತದ ರೆ , ಅದು ಇಲ್ಲ . ವಟ್ಟ ಎಲ್ಲ ಘೋಳ್ ಅಗೆದ ಜೀವನದ್ದು .
ಖರೆ ಸುಖ , ಖರೆ ಸಮಾಧಾನ ನಮ್ಮ ಒಳಗ ಅದ . ಆದ್ರ ನಾವು ಕ್ಶುಲ್ಲಕ್ ವಿಷಯದಾಗ ಇಷ್ಟ ರಮಷೆವಿ ಲಾ ಇದೆಲ್ಲ ನಮಗ ತಿಳಿಯ ವಲ್ತು . ನಮ್ಮ ಕಂಪನ್ಯಾಗ ಇದರಲಾ , ಅವರನ್ನ ನೋದ್ರಿದ್ರ - ಏನ್ ಪಾ ಇವರೆಲ್ಲ ಹಿಂಗ್ ಇದ್ದರ ಅನಸ್ತದ ... ಮುಂಜಾನೆ ಅಗದಿ ಗಡಬಡಿ ಇಂದ ಆಫೀಸ್ಗೆ ಬರೋದು , ಮತ್ತು ಏನೋ ದೊಡ್ಡ ಆರ್ ಎಂಡಿ ಮಾಡೋಹಂಗ ಕೆಲಸದ ಬಗ್ಗೆ ಮಾತಾಡೋದು , ಯಾರರೆ ಕೇಳಿದ್ರ ಏನೋ ಕಟ್ಟಿಂಗ್ ಏಜ್ ಕೆಲಸ ನಡದ ಅಂತ ತಿಳ್ಕೊಬೇಕು . ಸನ್ನ ಸನ್ನ ವಿಷಯ ದೊಡ್ಡದ ಮಾಡೋದು . ದೊಡ್ಡ ದೊಡ್ಡ ಬಾಟಲಿ ನೀರು ತುಂಬ್ಕೊಂಡ್ ಬಂದು ಬಾಜುಕ್ ಇಟ್ಕೊಳ್ಳೋದು , ಏನ್ ಒಂದ್ ೨ ನಿಮಿಷ ಎದ್ದ ಹೋಗಿ ಕುಡದ ಬಂದ್ರ ಸಾಯ್ತಾರ ? ಇಲ್ಲ ಪ್ರೊಡಕ್ ಟಿವಿಟಿ ಕಮ್ಮಿ ಆದ್ರ ? ನವ್ನ ಪ್ರೊಡಕ್ ಟಿವಿಟಿ . ಮನಿ ಇಂದ ತಂದ ಊಟ ಬಿಶಿ ಮಾಡ್ಲಿಕ್ಕೆ ದೊಡ್ಡ ಕ್ಯು ... ಬುದ್ಧಿ ಎಲ್ ಇಟ್ಟಾರ ಅನಸ್ತದ.
ಎಲ್ಲರ ಮುಂದ ನಾಟಕ ಮಾಡೋದು . ಆಫಿಸ್ ನ್ಯಾಗ ಮ್ಯಾನೇಜರ್ ಮುಂದ , ಮನ್ಯಾಗ ಅವ್ವ -ಅಪ್ಪ , ಹೆಂತಿ ಮುಂದ . ನಾವ್ ಅಂತ ಎಲ್ ಇದ್ದೇವಿ ಹೇಳ್ರಿ . ನಮ್ಮ ನಿಜವಾದ ನಮ್ಮತನ ಸುಟ್ಟ ಹೊಗೆದೇನೋ, ಇಂಥ ನಾಟಕ ಮಾಡ್ಕೊತ ? ಮನಷ್ಯ ಅಂದ್ರ ಒಂದ್ ಮಷಿನ್ ಆಗಿ ಬಿಟ್ಟಾನ ... ಅವನ್ದ್ರಾಗ ಮನುಷ್ಯನ ಗುಣಗೋಳ ಇಲ್ಲಧಂಗ ಆಗ್ಯಾವ.
ಇದೆಲ್ಲ ನೋಡಿದ್ರ ನಾವೆಲ್ಲ ಎಲ್ ಹೊಂಟೆವಿ ಅನಸ್ತದ . ಇಡಿ ಜಗತ್ ಹೇಳೋ ಹಂಗ ನಾವ್ ಖರೇನ ಡೇವ್ ಲೇಪ್ದ್ ಅಗ್ಲಿಕತ್ತೆವೋ ಅಥವಾ ಹಾಳ್ ಅಗ್ಲಿಕತ್ತೆವೋ , ಯಾರಿಗ್ಗೊತ್ತು.
No comments:
Post a Comment