ನನಗ ಬೇಲುರ್ -ಹಳೆಬಿಡ್ ನೋಡ್ ಬೇಕು ಅಂತ ಬಹಳ ಮನಸಿನ್ಯಾಗ ಇತ್ತು . ಪುಸ್ತಕದಾಗ ಎಲ್ಲ ಓದ್ತಿದ್ದೆ . ಮೊನ್ನೆ ನನ್ನ ದೋಸ್ತ್ ವಿನಾಯಕನ ಜೊತಿ ಅದು ಘಡಾಸಿತು . ಅದರಾಗ ಬೇಲುರ್ ಅಂತು ಕೇಳಬ್ಯಾಡ್ರಿ ಬಹಳ ಛಂದ ಅದ . ಮನಸ್ಸಿಗೆ ಬಹಳ ಸಮಾಧಾನ ಸಿಕ್ತು . ಏನ್ ಕೆತ್ತನಾ ಮಾಡ್ಯಾರ್ರಿ ... ಅರ್ರೆರೆರೆ ... ಎರಡ ಕಣ್ಣ ಸಾಕಾಗಾಂಗಿಲ್ರೀ ನೋಡ್ಲಿಕ್ಕೆ . ಅಲ್ಲಾ ಆಗಿನ ಕಾಲದ ರಾಜರಿಗೆ ಹಿಂತವೆಲ್ಲಾ ಹೆಂಗ್ ತಲಿಗೆ ಬರತಿದ್ದು ಅಂತೇನಿ . ಅದು ಅಜ್ಜ ಶುರು ಮಾಡಿದ ಮತ್ತ ಮೊಮ್ಮಗ ಮುಗಿಸಿದ ಈ ಗುಡಿ . ಮತ್ತ ನಮಗೇನ ಅಗೆದ ಬ್ಯಾನಿ ಅಂತೇನಿ . ಎಲ್ ನೋಡಿದಲ್ಲೆ ಕಲೆ ಎಲ್ ನೋಡಿದಲ್ಲೆ ಸೌಂದರ್ಯ ... ಮನಷ್ಯನ ಕುವತ್ತು ಪರಾಕಾಷ್ಥಾ ಮುಟ್ಟೆದ ಅಂದ್ರ ತಪ್ಪಾಗಂಗಿಲ್ಲರಿ . ಅದರಾಗ ಚೆನ್ನಕೇಶವನ ಮುರ್ತಿರೆ ಅಗಧಿ ಛಂದ ಅದ ... ನನಗ ಅಂತು ಅವನ ಮುಖಾನ ನೋಡ್ಕೊತ್ ಕುತ್ತ್ ಬಿಡ ಬೇಕು ಅಂತ ಅನಸ್ಲಿಕತ್ತಿತ್ತು . ಏನ್ ಕಳಾ ಏನ್ ತೇಜಸ್ಸು ಆಹಾ .
ಗುಡಿ ಆವರಣದಾಗ ಒಂದೊಂದು ಮುರ್ತಿಗುನು ಒಂದೊಂದು ಕಥಿ ಅವ . ಒಂದೊಂದು ಖಂಬ ಕ್ಕೂ ಒಂದೊಂದು ಕಥಿ ಅವ ... ಅಲ್ಲೇ ಇರು ಒಂದೊಂದು ಕಲ್ಲಿಗೂ ವಿಶಾಲವಾದ ಕಥಿ ಅವ ರೀ . ಅದನ್ನೆಲ್ಲಾ ನೋಡಿ ನಮ್ಮ ಇದ್ದ ಬಿದ್ದ ಹುಚ್ಚತನ ಎಲ್ಲಾ ಸುಟ್ಟ ಬೂದಿ ಆಗ್ತಾವ್ ನೋಡ್ರಿ . ಅದರಾಗ ನನಗ ವಿಷ್ನುನ ಅವತಾರ ಆದ ಮೋಹಿನಿ ಮೂರ್ತಿ ನೋಡಿ ಹುಚ್ ಆಗ್ ಬಿಟ್ಟೆ ನೋಡ್ರಿ . ಇನ್ನೆನ ಕುನದಾ ಡಾವಾ ಇದ್ದೆ ನಾನು ಬಹಳ ಮಂದಿ ಇದ್ರೂ ಅಂತ ಸುಮ್ನ ಆದೆ . ಆಲ್ ರೀ ಮೋಹಿನಿ ಎದ್ದ ಬಂಧಂಗ ಅದ . ವಿಶಾಲ ಹಣೆ , ಉದ್ದ ಮೂಗು , ಛಂದ ಕಣ್ಣು , ಅಗದಿ ನಾಜೂಕಾದ ಹಾವ ಭಾವ ... ಪುರಾಣ ಒಳಗ ವಿಷ್ಣು ಮೋಹಿನಿ ರೂಪ ಧರಿಸಿದ ಮ್ಯಾಲೆ ಎಲ್ಲಾ ಮಂದಿ ಹುಚ್ಚರಾಗಿ ಬಿಟ್ರು ಅಂತ ಕಥಿ ಅದ ... ಅದ ಖರೆ ಇರ್ಬೇಕು ನೋಡ್ರಿ .
ಸಂಜಿ ನಾನು ಗುಡಿ ಆವರಣದಾಗ ಸುಮ್ನ ತೊಡಿ ಹಾಕಿ ಕೂತಿದ್ದೆ ... ತಂಪಾದ ಗಾಳಿ , ಎತ್ತ ಕಣ್ಣು ಹಾಯ್ಸಿದರು ಸೌಂದರ್ಯ, ಕವಿತೆ ... ಜೀವನದಾಗ ಏನ್ ಸಿಗ್ಬೇಕೋ ಎಲ್ಲಾ ಸಿಕ್ಕಂಗಾತು ನೋಡ್ರಿ ಆ ಕ್ಷಣದಾಗ. ಖರೆ ಅದ - ಜೀವನದಾಗ ಅತಿ ಆನಂದ ಕೊಡೊ ವಸ್ತು ಎಲ್ಲಾ ಪುಕಟ್ ಸಿಗತಾವ. ನಮ್ಮ ಸಮಜದಾಗ ಇರೋ ವ್ಯಶಮ್ಯ, ಇರ್ಷೆ , ಹೊಡೆದಾಟ -ಬಡಿದಾಟ , ಅಹಂಭಾವ , ಗುದ್ದಾಟ ಎಲ್ಲಾ ಕ್ಷುಲ್ಲಕ್ ಅವ ಅಂತ ಅನಿಸ್ಬಿಡ್ತಾವ ನೋಡ್ರಿ . ಹಿಂತ ಆನಂದ ನಮಗೆಲ್ಲರಿಗೂ ಯಾವತ್ತಿಗೂ ಇರಲಿ.
No comments:
Post a Comment