Tuesday, 3 April 2012

ಬೇಲುರ್- ಮನದಾಳದ ಮಾತು


ನನಗ  ಬೇಲುರ್ -ಹಳೆಬಿಡ್  ನೋಡ್  ಬೇಕು  ಅಂತ  ಬಹಳ  ಮನಸಿನ್ಯಾಗ  ಇತ್ತು . ಪುಸ್ತಕದಾಗ  ಎಲ್ಲ  ಓದ್ತಿದ್ದೆ . ಮೊನ್ನೆ  ನನ್ನ  ದೋಸ್ತ್  ವಿನಾಯಕನ  ಜೊತಿ  ಅದು  ಘಡಾಸಿತು . ಅದರಾಗ  ಬೇಲುರ್  ಅಂತು  ಕೇಳಬ್ಯಾಡ್ರಿ  ಬಹಳ  ಛಂದ  ಅದ . ಮನಸ್ಸಿಗೆ  ಬಹಳ  ಸಮಾಧಾನ  ಸಿಕ್ತು . ಏನ್  ಕೆತ್ತನಾ ಮಾಡ್ಯಾರ್ರಿ ... ಅರ್ರೆರೆರೆ ... ಎರಡ  ಕಣ್ಣ  ಸಾಕಾಗಾಂಗಿಲ್ರೀ   ನೋಡ್ಲಿಕ್ಕೆ . ಅಲ್ಲಾ  ಆಗಿನ  ಕಾಲದ  ರಾಜರಿಗೆ  ಹಿಂತವೆಲ್ಲಾ  ಹೆಂಗ್  ತಲಿಗೆ  ಬರತಿದ್ದು  ಅಂತೇನಿ . ಅದು  ಅಜ್ಜ  ಶುರು  ಮಾಡಿದ  ಮತ್ತ  ಮೊಮ್ಮಗ  ಮುಗಿಸಿದ  ಈ  ಗುಡಿ . ಮತ್ತ  ನಮಗೇನ  ಅಗೆದ  ಬ್ಯಾನಿ  ಅಂತೇನಿ . ಎಲ್  ನೋಡಿದಲ್ಲೆ  ಕಲೆ  ಎಲ್  ನೋಡಿದಲ್ಲೆ  ಸೌಂದರ್ಯ ... ಮನಷ್ಯನ  ಕುವತ್ತು  ಪರಾಕಾಷ್ಥಾ  ಮುಟ್ಟೆದ  ಅಂದ್ರ  ತಪ್ಪಾಗಂಗಿಲ್ಲರಿ . ಅದರಾಗ  ಚೆನ್ನಕೇಶವನ  ಮುರ್ತಿರೆ  ಅಗಧಿ  ಛಂದ  ಅದ ... ನನಗ  ಅಂತು  ಅವನ  ಮುಖಾನ  ನೋಡ್ಕೊತ್  ಕುತ್ತ್  ಬಿಡ ಬೇಕು  ಅಂತ  ಅನಸ್ಲಿಕತ್ತಿತ್ತು . ಏನ್  ಕಳಾ ಏನ್  ತೇಜಸ್ಸು  ಆಹಾ .

ಗುಡಿ   ಆವರಣದಾಗ  ಒಂದೊಂದು  ಮುರ್ತಿಗುನು  ಒಂದೊಂದು  ಕಥಿ  ಅವ . ಒಂದೊಂದು  ಖಂಬ ಕ್ಕೂ  ಒಂದೊಂದು  ಕಥಿ  ಅವ ... ಅಲ್ಲೇ  ಇರು  ಒಂದೊಂದು  ಕಲ್ಲಿಗೂ  ವಿಶಾಲವಾದ  ಕಥಿ  ಅವ  ರೀ . ಅದನ್ನೆಲ್ಲಾ  ನೋಡಿ  ನಮ್ಮ  ಇದ್ದ  ಬಿದ್ದ  ಹುಚ್ಚತನ  ಎಲ್ಲಾ  ಸುಟ್ಟ  ಬೂದಿ  ಆಗ್ತಾವ್  ನೋಡ್ರಿ . ಅದರಾಗ  ನನಗ  ವಿಷ್ನುನ  ಅವತಾರ  ಆದ  ಮೋಹಿನಿ  ಮೂರ್ತಿ  ನೋಡಿ  ಹುಚ್  ಆಗ್  ಬಿಟ್ಟೆ  ನೋಡ್ರಿ . ಇನ್ನೆನ   ಕುನದಾ ಡಾವಾ ಇದ್ದೆ  ನಾನು  ಬಹಳ  ಮಂದಿ  ಇದ್ರೂ  ಅಂತ  ಸುಮ್ನ  ಆದೆ . ಆಲ್  ರೀ  ಮೋಹಿನಿ  ಎದ್ದ  ಬಂಧಂಗ  ಅದ . ವಿಶಾಲ  ಹಣೆ , ಉದ್ದ  ಮೂಗು , ಛಂದ  ಕಣ್ಣು , ಅಗದಿ ನಾಜೂಕಾದ  ಹಾವ  ಭಾವ ... ಪುರಾಣ  ಒಳಗ  ವಿಷ್ಣು  ಮೋಹಿನಿ  ರೂಪ  ಧರಿಸಿದ  ಮ್ಯಾಲೆ  ಎಲ್ಲಾ ಮಂದಿ ಹುಚ್ಚರಾಗಿ  ಬಿಟ್ರು  ಅಂತ  ಕಥಿ  ಅದ ... ಅದ  ಖರೆ  ಇರ್ಬೇಕು  ನೋಡ್ರಿ .

ಸಂಜಿ  ನಾನು  ಗುಡಿ  ಆವರಣದಾಗ ಸುಮ್ನ  ತೊಡಿ  ಹಾಕಿ  ಕೂತಿದ್ದೆ ... ತಂಪಾದ  ಗಾಳಿ , ಎತ್ತ  ಕಣ್ಣು  ಹಾಯ್ಸಿದರು   ಸೌಂದರ್ಯ, ಕವಿತೆ ... ಜೀವನದಾಗ  ಏನ್  ಸಿಗ್ಬೇಕೋ  ಎಲ್ಲಾ  ಸಿಕ್ಕಂಗಾತು ನೋಡ್ರಿ  ಆ  ಕ್ಷಣದಾಗ. ಖರೆ  ಅದ - ಜೀವನದಾಗ  ಅತಿ  ಆನಂದ  ಕೊಡೊ  ವಸ್ತು  ಎಲ್ಲಾ  ಪುಕಟ್  ಸಿಗತಾವ. ನಮ್ಮ  ಸಮಜದಾಗ  ಇರೋ  ವ್ಯಶಮ್ಯ, ಇರ್ಷೆ , ಹೊಡೆದಾಟ -ಬಡಿದಾಟ , ಅಹಂಭಾವ , ಗುದ್ದಾಟ  ಎಲ್ಲಾ  ಕ್ಷುಲ್ಲಕ್  ಅವ  ಅಂತ  ಅನಿಸ್ಬಿಡ್ತಾವ  ನೋಡ್ರಿ . ಹಿಂತ  ಆನಂದ  ನಮಗೆಲ್ಲರಿಗೂ  ಯಾವತ್ತಿಗೂ  ಇರಲಿ.

Tuesday, 20 December 2011

ಸಿಂಪಲ್ ಜೀವನ : ನನ್ನ ದೃಷ್ತಿ ಯಲ್ಲಿ



ನನ್ನ  ಈ  ಬ್ಲಾಗ್  ನ  ಓದುಗ  ಒಬ್ಬ  ನನ್ನ  ದೃಷ್ತಿ  ಒಳಗಾ  ಇವತ್ತಿನ  ಜೀವನ  ದಾಗ  ಸಿಂಪಲ್  ಜೀವನ  ಅಂದ್ರ  ಏನು  ಅಂತ  ಕೇಳಿದ್ರು . ಅದಕ್ಕ  ಉತ್ತರ  ಅಂತ  ಈ  ಬ್ಲಾಗ್ . ಇದು  ಬರೆ  ನನ್ನ  ಅನಿಶಿಕೆ  ಅಷ್ಟ , ನಂದು  ತಪ್ಪು  ಇರಬಹುದು  . ನಾನು  ತಪ್ಪಿದರ  ಶಾನ್ಯಾರಾದ  ನೀವ್  ನನ್ನ  ತಿದ್ದ  ಬೇಕು .

ಸಿಂಪಲ್  ಅಂದ್ರ  ಸಿಂಪಲ್  ವಿಚಾರ  ಇರವ್ರು . ಬ್ಯಾಡ್  ದಿರೋದನ್ನ  ವಿಚಾರ  ಮಾಡಿ , ನನ್ನ  ಆಜು -ಬಾಜುಕ  ನಡೆಯೋ  ಎಲ್ಲದಕ್ಕೂ  ನಾನ  ಜವಾಬ್ದಾರ  ಅಂತ  ತಿಳಕೊಲ್ಲೋದು  ಜೀವನ  ಕಾಂಪ್ಲಿಕೆಟ್  ಮಾಡ  ಕೊನಧಂಗ . ಸಿಂಪಲ್  ಜೀವನ  ಅಂದ್ರ  ಬರೆ  ತುಟ್ಟಿ ಅರಬಿ  ಬೂಟು  ಹಾಕೊಳ್ಳದ  ಮೆಕ್ -ಅಪ  ಮಾದ್ಕೊಳ್ಳದ  ಇರೋದು  ಅಂತ  ಅಲ್ಲ . ಸಿಂಪಲ್  ವಿಚಾರ  ದಿಂದ  ಸಿಂಪಲ್  ಅರಬಿ  ಬೂಟು  ಉಪಯೋಗ  ಮಾಡೋಹಂಗ  ಆದರು  ಆಗಬಹುದು .

ಇನ್  ಸಿಂಪಲ್  ವಿಚಾರ  ಅಂದ್ರ  ಏನು ? ನಾವ್  ಯಾವಾಗ್  ನಮ್ಮ  ಹೃದಯದ  ಮಾತ್  ಕೆಳ್ತೆವಿ , ಮಂದಿ  ಗೆ  ಕೆಡಕ  ಮಾಡದ  ನಮಗ  ಏನ್  ಅನಸ್ತದ  ಅದನ್ನ  ಮಾಡ್ತೆವಿ  - ಅದ  ಸಿಂಪಲ್  ವಿಚಾರ . ಇಂಗ್ಲಿಶ್  ನ್ಯಾಗ  ಹೇಳೋದು  ಅಂದ್ರ  ಫಾಲೋ  ಯುರ್  ಹಾರ್ಟ್ . ನಮ್ಮ  ಕಡೆ  ಎಸ್ಟ್  ಆಗ್ತದೋ  ಅಷ್ಟ  ಕರ್ತವ್ಯ  ಅಂತ  ಮಾಡಿ , ತಲಿ  ಕೆಡಿಸಿಕೊಳ್ಳದ  ಇರೋದು . ನಾವ್  ಏನೂ  ಅಪೇಕ್ಷಾ  ಮಾಡದ  ಇರೋದು . ನನಗ  ನೀಗಿದ್ದ  ನಾ  ಮಾಡೇನಿ  ಅಂತ  ಸಮಾಧಾನ  ದಿಂದ  ಇರೋದು . ನಾವ್  ಹೆಂಗ್  ಇದ್ದೆವೋ  ಹ್ಯಾಂಗ್  ಇರಲಿಕ್ಕೆ  ಕಲತ್ರ  ನಾವ್  ಸಿಂಪಲ್  ಇದ್ದಂಗ . ನಾವ್  ಹಿಂಗ್  ಮಾಡಿದ್ರ  ಮಂದಿ  ಏನ್  ಅಂತಾರ , ನಾವ್  ಹಂಗ  ಮಾಡಲಿಲ್ಲ  ಅಂದ್ರ  ಮಂದಿ  ಏನ್  ತಿಳಕೊಂದಾರ  ಅಂತ  ಯಾವಾಗ್  ನಮಗ  ಅನ್ಸೋದು  ಹೋಗ್ತದ  ನೋ  ಆ  ದಿವಸ ನಾವ್  ಸಿಂಪಲ್  ಇರೋದು  ಕಲಿತ್ವಿ  ಅಂತ  ನ . ಮತ್ತ  ನಮಗ  ಜೀವನ  ಅರ್ಥ  ಆತು  ಅಂತನ . ಇದನ್ನ  ನಾವ್ - ನಾವ್  ಒಳಗ  ಹೊರಗ  ಒಂದ  ಥರ ಇರಬೇಕು  ಅಂತ  ನು  ಹೇಳಬಹುದು . ನಮಗ  ಜೀವನದಾಗ  ಭಾಳ್  ಏನ್  ಬೇಕಾಗಂಗಿಲ್ಲ  ರೀ , ನಮಗ  ಇದ  ತಿಳದ್ರ  ಜೀವನ  ನಂದ  ಗೋಕುಲ್  ಗತೆ  ಇರತದ , ದಿನಾ  ದೀಪಾವಳಿ  ಇದ್ದಂಗ  ಇರ್ತದ .

ಇದೆಲ್ಲ  ತಿಳಿಬೇಕು  ಅಂದ್ರ  ನಾವ್  ಇಲ್ಲಿತನಕ  ಓದಿದ್ದನ್ನ  ಮತ್ತ  ಸಮಾಜ  ನಮಗ  ಕಲಿಸಿದ್ದನ್ನ  ಕ್ಲಿಯರ್ ಮಾಡ್ಕೋ  ಬೇಕು  (ಇಂಗ್ಲಿಶ್  ನ್ಯಾಗ  ಅನ್ಲರ್ನ್ ). ಯಾಕಂದ್ರ  ಸಿಂಪಲ್  ಇರೋದು  ನಮ್ಮ  ನೈಜ  ಸ್ವಭಾವ  ಅದ . ಅದನ್ನ  ಕಲಿ  ಬೇಕಾಗಂಗಿಲ್ಲ . ನಿಮಗ  ಯಾವಾಗ್  ಜೀವನ  ಅಗಧಿ  ಸಲೀಸಾಗಿ  ನಡದದ  ಅಂತ  ಅನಸ್ತದೋ , ಮತ್ತ  ಹೊರಗ  ಏನ  ಆದರು  ನಾವ್  ಅಗಧಿ  ಖುಷಿ  ಇಂದ  ಮತ್ತ  ಸಮಾಧಾನ  ದಿಂದ  ಇರಲಿಕತ್ತೆವಿ  ಅಂತ  ಅನಸ್ತದೋ  ನಮ್ಮ  ಜೀವನ  ಸಾರ್ಥಕ  ಆತು  ಅಂತನ .

Wednesday, 14 December 2011

ಹೆಂಗ್ ಇದ್ದೆವೋ ಹಂಗ ಇರಲಿಕ್ಕೆನು ಬ್ಯಾನಿ

ಯತ್ತ್ ನೋಡಿದರು ಬರೆ  ನಾಟಕನ. ಎಲ್ಲರು ಸೋಂಗ ಹಾಕಿದವರ. ನಾವ್, ನಾವ್  ಹೆಂಗಿದ್ದೆವೋ ಹಂಗ ಇದ್ದ ಎಸ್ಟ ದಿವಸ, ಎಸ್ಟ ವರ್ಷ ಆತೋ. ಬೆಂಗಳೂರ್ ಹಂತ  ಊರಾಗ, ಮತ್ತ ಸೊಫ್ಟ್ವೇರ್ ಕ್ಷ್ಟೇತ್ರದಾಗ ಇದ್ರ ಅಂತು ಮುಗದ ಹೋತು... ನಮ್ಮ ಜೀವನನ ನಮಗ  ಅರ್ಥ  ಆಗಂಗಿಲ್ಲ . ನಮಗ  ಏನ್  ಶೆರ್ತದ , ನಾವ್  ಏನ್  ಮಾಡಿದ್ರ  ಸಮಾಧಾನ  ಸಿಗ್ತದ  ಅನ್ನೋದನ್ನ  ವಿಚರರೆ  ಮಾಡ್ತೆವಿ ? ಬರೆ ರೊಕ್ಕದ  ಹಿಂದ  ಓಡೋದ  ಆತು ... ಒಂದ್  ನಿಮಿಷ  ಶಾಂತ  ಕುಡ್ಲಿಕ್ಕೆ  ನಮಗ  ಆಗ್ತದ  ರೆ , ಅದು ಇಲ್ಲ . ವಟ್ಟ  ಎಲ್ಲ  ಘೋಳ್ ಅಗೆದ  ಜೀವನದ್ದು .

ಖರೆ  ಸುಖ , ಖರೆ  ಸಮಾಧಾನ  ನಮ್ಮ  ಒಳಗ  ಅದ . ಆದ್ರ  ನಾವು  ಕ್ಶುಲ್ಲಕ್  ವಿಷಯದಾಗ  ಇಷ್ಟ  ರಮಷೆವಿ ಲಾ ಇದೆಲ್ಲ  ನಮಗ  ತಿಳಿಯ  ವಲ್ತು . ನಮ್ಮ  ಕಂಪನ್ಯಾಗ  ಇದರಲಾ  , ಅವರನ್ನ  ನೋದ್ರಿದ್ರ - ಏನ್  ಪಾ ಇವರೆಲ್ಲ  ಹಿಂಗ್  ಇದ್ದರ  ಅನಸ್ತದ ... ಮುಂಜಾನೆ  ಅಗದಿ  ಗಡಬಡಿ  ಇಂದ  ಆಫೀಸ್ಗೆ  ಬರೋದು , ಮತ್ತು  ಏನೋ  ದೊಡ್ಡ  ಆರ್  ಎಂಡಿ  ಮಾಡೋಹಂಗ ಕೆಲಸದ  ಬಗ್ಗೆ  ಮಾತಾಡೋದು , ಯಾರರೆ ಕೇಳಿದ್ರ  ಏನೋ  ಕಟ್ಟಿಂಗ್  ಏಜ್  ಕೆಲಸ  ನಡದ  ಅಂತ ತಿಳ್ಕೊಬೇಕು . ಸನ್ನ ಸನ್ನ ವಿಷಯ  ದೊಡ್ಡದ  ಮಾಡೋದು . ದೊಡ್ಡ  ದೊಡ್ಡ  ಬಾಟಲಿ  ನೀರು  ತುಂಬ್ಕೊಂಡ್  ಬಂದು ಬಾಜುಕ್  ಇಟ್ಕೊಳ್ಳೋದು , ಏನ್  ಒಂದ್  ೨  ನಿಮಿಷ  ಎದ್ದ  ಹೋಗಿ  ಕುಡದ ಬಂದ್ರ ಸಾಯ್ತಾರ ? ಇಲ್ಲ  ಪ್ರೊಡಕ್ ಟಿವಿಟಿ   ಕಮ್ಮಿ ಆದ್ರ ? ನವ್ನ  ಪ್ರೊಡಕ್ ಟಿವಿಟಿ . ಮನಿ  ಇಂದ ತಂದ  ಊಟ  ಬಿಶಿ  ಮಾಡ್ಲಿಕ್ಕೆ  ದೊಡ್ಡ  ಕ್ಯು ... ಬುದ್ಧಿ  ಎಲ್  ಇಟ್ಟಾರ ಅನಸ್ತದ.

ಎಲ್ಲರ  ಮುಂದ  ನಾಟಕ  ಮಾಡೋದು . ಆಫಿಸ್  ನ್ಯಾಗ  ಮ್ಯಾನೇಜರ್  ಮುಂದ , ಮನ್ಯಾಗ  ಅವ್ವ -ಅಪ್ಪ , ಹೆಂತಿ  ಮುಂದ . ನಾವ್  ಅಂತ  ಎಲ್  ಇದ್ದೇವಿ  ಹೇಳ್ರಿ . ನಮ್ಮ  ನಿಜವಾದ  ನಮ್ಮತನ  ಸುಟ್ಟ  ಹೊಗೆದೇನೋ, ಇಂಥ  ನಾಟಕ  ಮಾಡ್ಕೊತ ? ಮನಷ್ಯ  ಅಂದ್ರ  ಒಂದ್  ಮಷಿನ್  ಆಗಿ  ಬಿಟ್ಟಾನ ... ಅವನ್ದ್ರಾಗ  ಮನುಷ್ಯನ  ಗುಣಗೋಳ  ಇಲ್ಲಧಂಗ ಆಗ್ಯಾವ.

ಇದೆಲ್ಲ  ನೋಡಿದ್ರ  ನಾವೆಲ್ಲ  ಎಲ್  ಹೊಂಟೆವಿ  ಅನಸ್ತದ . ಇಡಿ  ಜಗತ್  ಹೇಳೋ  ಹಂಗ  ನಾವ್  ಖರೇನ  ಡೇವ್ ಲೇಪ್ದ್  ಅಗ್ಲಿಕತ್ತೆವೋ  ಅಥವಾ  ಹಾಳ್  ಅಗ್ಲಿಕತ್ತೆವೋ , ಯಾರಿಗ್ಗೊತ್ತು.

Monday, 14 November 2011

ಈ ಬ್ಲಾಗ್ ಯಾದರ ಸಮಂದ?

ನಾ ಈ ಬ್ಲಾಗ್ ಯಾಕ ಬರಿಲಿ ಕತ್ತೆನಿ? ನನಗೇನ್ ಭಾಳಸ್ಟ್ ಮಂದಿ ಇದನ್ನ ಓದ ಬೇಕು ಮತ್ತ ನಾ ಭಾಳ ಫೇಮಸ್ ಆಗಬೇಕು ಅಂತ ಅಲ್ಲ... ನನಗ ಏನ್ ಅನಸ್ತದೋ ಅದನ್ನ ಹೇಳಿಕ್ಕೆ. ಇಂಥ ಗಡಿಬಿಡಿ ಇಂಥ ಟೆನ್ಶನ್ ಇಂಥ ಫಾಸ್ಟ್ ಮೂಇಂಗ್ ಲೈಫ್ ದಾಗ ನನ್ನ ಮಾತ್ ಕೆಳವ್ರ್ಯರ? ಅದಕ್ಕ ಇಲ್ಲ್ಯರೆ ಬರದ ಅದನ್ನೆಲ್ಲಾ ಹೊರಗ ಹಾಕ್ ಬೇಕು ಅಂತ ಬರಿಲಿ ಕತ್ತೆನಿ. ಇವತ್ತಿನ ಜಗತ್ನ್ಯಾಗ ಮನಶ್ಯಂದ  ಕಿಮ್ಮತ್ತ ಎಲ್ ಉಳದದ ಹೇಳ್ರಿ? ಬರೇ ರೊಕ್ಕದ ಹಿಂದ್ ಬಿದ್ದ ನಮ್ಮ ಜೀವನ ಎಲ್ಲ ಹಾಳ್ ಮಾಡ್ಕೊಲಿಕತ್ತೆವಿ... ಛಂದ ಸಿಂಪಲ್ ಆಗಿ ಜೀವನ ಮಾಡಿ ... ಸಂತೋಷದಿಂದ ಇರೋದನ್ನ ನಾವು ಮರತ ಬಿಟ್ಟೆವಿ ಅನಸ್ತದ. ಇದನೆಲ್ಲ ನಾ ಯಾರ ಮುಂದೆರ ಹೇಳಿದ್ರ ನಕ್ಕ ಬಿಡತಾರ ಮಂದಿ. ಅದಕ್ಕ ಈ ಬ್ಲಾಗ್. ಗೂಗಲ್ ದವರಿಗೆ ನನ್ನ ಥ್ಯಾಂಕ್ಸ ರೀ.


ನಮ್ಮ ಉತ್ತರ ಕರ್ನಾಟಕದ ಕನ್ನಡದಾಗ ಬರದ್ರ ಅಗದಿ ಛಂದ ಬರಿ ಬಹುದು ಮತ್ತ ನನಗ ವಿಚಾರ ಮಾಡ್ಲಿಕ್ಕೆ ಹತ್ತಂಗಿಲ್ಲ ... ಮನಸ್ನ್ಯಾಗ ಇರೋದು ಹಂಗ ಬರಿಬಹುದು ನೋಡ್ರಿ ಅದಕ್ಕ.


ನಿಮ್ಮ,
ಶ್ರೀ ಸಾಮಾನ್ಯ