ನಾ ಈ ಬ್ಲಾಗ್ ಯಾಕ ಬರಿಲಿ ಕತ್ತೆನಿ? ನನಗೇನ್ ಭಾಳಸ್ಟ್ ಮಂದಿ ಇದನ್ನ ಓದ ಬೇಕು ಮತ್ತ ನಾ ಭಾಳ ಫೇಮಸ್ ಆಗಬೇಕು ಅಂತ ಅಲ್ಲ... ನನಗ ಏನ್ ಅನಸ್ತದೋ ಅದನ್ನ ಹೇಳಿಕ್ಕೆ. ಇಂಥ ಗಡಿಬಿಡಿ ಇಂಥ ಟೆನ್ಶನ್ ಇಂಥ ಫಾಸ್ಟ್ ಮೂಇಂಗ್ ಲೈಫ್ ದಾಗ ನನ್ನ ಮಾತ್ ಕೆಳವ್ರ್ಯರ? ಅದಕ್ಕ ಇಲ್ಲ್ಯರೆ ಬರದ ಅದನ್ನೆಲ್ಲಾ ಹೊರಗ ಹಾಕ್ ಬೇಕು ಅಂತ ಬರಿಲಿ ಕತ್ತೆನಿ. ಇವತ್ತಿನ ಜಗತ್ನ್ಯಾಗ ಮನಶ್ಯಂದ ಕಿಮ್ಮತ್ತ ಎಲ್ ಉಳದದ ಹೇಳ್ರಿ? ಬರೇ ರೊಕ್ಕದ ಹಿಂದ್ ಬಿದ್ದ ನಮ್ಮ ಜೀವನ ಎಲ್ಲ ಹಾಳ್ ಮಾಡ್ಕೊಲಿಕತ್ತೆವಿ... ಛಂದ ಸಿಂಪಲ್ ಆಗಿ ಜೀವನ ಮಾಡಿ ... ಸಂತೋಷದಿಂದ ಇರೋದನ್ನ ನಾವು ಮರತ ಬಿಟ್ಟೆವಿ ಅನಸ್ತದ. ಇದನೆಲ್ಲ ನಾ ಯಾರ ಮುಂದೆರ ಹೇಳಿದ್ರ ನಕ್ಕ ಬಿಡತಾರ ಮಂದಿ. ಅದಕ್ಕ ಈ ಬ್ಲಾಗ್. ಗೂಗಲ್ ದವರಿಗೆ ನನ್ನ ಥ್ಯಾಂಕ್ಸ ರೀ.
ನಮ್ಮ ಉತ್ತರ ಕರ್ನಾಟಕದ ಕನ್ನಡದಾಗ ಬರದ್ರ ಅಗದಿ ಛಂದ ಬರಿ ಬಹುದು ಮತ್ತ ನನಗ ವಿಚಾರ ಮಾಡ್ಲಿಕ್ಕೆ ಹತ್ತಂಗಿಲ್ಲ ... ಮನಸ್ನ್ಯಾಗ ಇರೋದು ಹಂಗ ಬರಿಬಹುದು ನೋಡ್ರಿ ಅದಕ್ಕ.
ನಿಮ್ಮ,
ಶ್ರೀ ಸಾಮಾನ್ಯ
ನಮ್ಮ ಉತ್ತರ ಕರ್ನಾಟಕದ ಕನ್ನಡದಾಗ ಬರದ್ರ ಅಗದಿ ಛಂದ ಬರಿ ಬಹುದು ಮತ್ತ ನನಗ ವಿಚಾರ ಮಾಡ್ಲಿಕ್ಕೆ ಹತ್ತಂಗಿಲ್ಲ ... ಮನಸ್ನ್ಯಾಗ ಇರೋದು ಹಂಗ ಬರಿಬಹುದು ನೋಡ್ರಿ ಅದಕ್ಕ.
ನಿಮ್ಮ,
ಶ್ರೀ ಸಾಮಾನ್ಯ
Nangu bottle vishya artha aagalla. Nandondu prashne ide : Simple aagi jeevana maadbeku andralla, eegina kaladalli simple andre enu?
ReplyDeleteHebbar avare, nanna blog-na bheti nididdakke dhanyavada. Nimma prashne-ge nanu nanna mundina blog moolaka uttara koduttene. mattu nimage idannu tilisuttene.
ReplyDelete